ಸಂವಹನ ವಿನ್ಯಾಸ ಪುರಸ್ಕಾರ
ಲ್ಯಾಟಿನ್ ಹೊರತಾದ ಲಿಪಿಗಳಿಗಾಗಿ
ಮೊದಲ ಆವೃತ್ತಿ 2026
Bloom Award
Bloom Award ಸಲ್ಲಿಕೆಗೆ ಮುಕ್ತ
ಸಲ್ಲಿಕೆ ಮುಗಿಯಲು ಉಳಿದ ಸಮಯ—
ಲ್ಯಾಟಿನ್ ಹೊರತಾದ ಲಿಪಿಗಳಿಗಾಗಿ ಮೊದಲ ಜಾಗತಿಕ ಸಂವಹನ ವಿನ್ಯಾಸ ಪುರಸ್ಕಾರ.
ಆಯಾ ಲಿಪಿಯನ್ನು ಸಹಜವಾಗಿ ಓದಬಲ್ಲ ತಜ್ಞರಿಂದ ತೀರ್ಪು.
Bloom Award ಎಂದರೇನು?
Bloom Award ಎಂದರೇನು?
GRANSHAN Bloom Award ಲ್ಯಾಟಿನ್ ಹೊರತಾದ ಲಿಪಿಗಳಿಗಾಗಿ ಸಂವಹನ ವಿನ್ಯಾಸ ಪುರಸ್ಕಾರವಾಗಿದೆ. ಇದು ಅಕ್ಷರಶೈಲಿಯನ್ನಲ್ಲ, ಅಕ್ಷರರೂಪಗಳನ್ನು ಬಳಸುವ ವಿನ್ಯಾಸವನ್ನು ಪರಿಗಣಿಸುತ್ತದೆ: ಅಕ್ಷರಶೈಲಿಗಳನ್ನು ಅಕ್ಷರರೂಪ ವಿನ್ಯಾಸ ಸ್ಪರ್ಧೆಯಾದ GRANSHAN Base Awardಗೆ ಸಲ್ಲಿಸಲಾಗುತ್ತದೆ.
ಜಗತ್ತು ಲ್ಯಾಟಿನ್ ಲಿಪಿಯಲ್ಲಿ ಮಾತ್ರ ಬರೆಯುವುದಿಲ್ಲ. ಅರೇಬಿಕ್, ಅರ್ಮೇನಿಯನ್, ಚೀನೀ, ಗ್ರೀಕ್, ಜಪಾನೀ, ಕೊರಿಯನ್, ತಮಿಳು, ಥಾಯ್ ಹಾಗೂ ಇನ್ನೂ ಎಷ್ಟೋ ಲಿಪಿಗಳಲ್ಲಿ ಬರೆಯುತ್ತದೆ. ಅವು ಕೇವಲ ಅಕ್ಷರಗಳಲ್ಲ: ಗುರುತು, ಪರಂಪರೆ ಮತ್ತು ಸೃಜನಶೀಲತೆಯ ಧ್ವನಿಗಳು.
GRANSHAN Bloom Award ಗೆ ಸಲ್ಲಿಸಿದ ಪ್ರತಿ ಸ್ಪರ್ಧಾಕೃತಿಯ ಮೌಲ್ಯಮಾಪನವು ಅದರ ಮೂಲ ಲಿಪಿಯಲ್ಲೇ ನಡೆಯುತ್ತದೆ. ಆ ಭಾಷೆಯನ್ನು ಮಾತನಾಡುವ, ಅದರ ಅಕ್ಷರ ಸಂಯೋಜನೆಯ ಸಂಪ್ರದಾಯಗಳನ್ನು ಅರಿತಿರುವ ಮತ್ತು ಅದರ ಸಾಂಸ್ಕೃತಿಕ ಅರ್ಥಗಳನ್ನು ಗ್ರಹಿಸುವ ವಿನ್ಯಾಸಕರು ಅದನ್ನು ಮೌಲ್ಯಮಾಪನ ಮಾಡುತ್ತಾರೆ. ಈ ಜಾಗತಿಕ ವೃಂದಕ್ಕೆ ನಿಮ್ಮ ಧ್ವನಿಯನ್ನೂ ಸೇರಿಸಿ. ಜಗತ್ತು ಅದನ್ನು ಸ್ಪಷ್ಟವಾಗಿ ಕೇಳಲಿ.
ಯಾರು ಭಾಗವಹಿಸಬಹುದು?
Bloom Award ಎಲ್ಲರಿಗಾಗಿ: ಸ್ಟುಡಿಯೊಗಳು, ಸ್ವತಂತ್ರ ವಿನ್ಯಾಸಕರು, ಬ್ರ್ಯಾಂಡ್‌ಗಳು ಮತ್ತು ಉದಯೋನ್ಮುಖ ಪ್ರತಿಭೆಗಳು. ನೀವು ಲ್ಯಾಟಿನ್ ಹೊರತಾದ ಲಿಪಿಗಳೊಂದಿಗೆ ವಿನ್ಯಾಸ ಮಾಡುತ್ತಿದ್ದರೆ, ಇದು ನಿಮಗಾಗಿ.
ನಾನು ಏನನ್ನು ಸಲ್ಲಿಸಬಹುದು?
ತೀರ್ಪು ನೀಡುವವರು ಯಾರು?
9 ಮಾಧ್ಯಮ ವಿಭಾಗಗಳು ಮತ್ತು 8 ಲಿಪಿ ಗುಂಪುಗಳಲ್ಲಿ ಪ್ರತಿ ಮಂಡಳಿಯೂ ಲಿಪಿ ತಜ್ಞರು ಮತ್ತು ಮಾಧ್ಯಮ ತಜ್ಞರನ್ನು ಒಗ್ಗೂಡಿಸುತ್ತದೆ. ಪ್ರತಿ ಲಿಪಿ ಗುಂಪಿನಲ್ಲಿ ಕನಿಷ್ಠ ಹನ್ನೆರಡು ತೀರ್ಪುಗಾರರಿರುತ್ತಾರೆ. ಹೀಗಾಗಿ ನಿಮ್ಮ ಕೃತಿ ಸಾಮಾನ್ಯ ಗುಂಪಿನಲ್ಲಿ ಕಳೆದುಹೋಗುವುದಿಲ್ಲ. ನಿಮ್ಮ ಲಿಪಿಯನ್ನೂ ಅದರ ಸಾಂಸ್ಕೃತಿಕ ಸೂಕ್ಷ್ಮತೆಗಳನ್ನೂ ಬಲ್ಲವರು ಅದನ್ನು ಪರಿಶೀಲಿಸುತ್ತಾರೆ.
ಏಕೆ ಭಾಗವಹಿಸಬೇಕು?
ನಿಮ್ಮ ಕೃತಿಗೆ ಮನ್ನಣೆ
ನಿಮ್ಮ ಗ್ರಾಹಕರು, ಸಹಯೋಗಿಗಳು ಮತ್ತು ಸಮುದಾಯದೊಂದಿಗೆ ಹಂಚಿಕೊಳ್ಳಬಹುದಾದ ಸ್ಪಷ್ಟ ಮನ್ನಣೆಯ ಗುರುತು.
ಉಳಿಸಿಕೊಳ್ಳಲು, ಹಂಚಿಕೊಳ್ಳಲು ಒಂದು ಪ್ರಮಾಣಪತ್ರ
ಪ್ರತಿ ಪ್ರಶಸ್ತಿ ವಿಜೇತರಿಗೂ ಸುಂದರವಾಗಿ ವಿನ್ಯಾಸಗೊಳಿಸಿದ ಡಿಜಿಟಲ್ ಪ್ರಮಾಣಪತ್ರ ದೊರೆಯುತ್ತದೆ – ಅವರ ಸಾಧನೆಯ ಶಾಶ್ವತ ದಾಖಲೆ, ಡೌನ್ಲೋಡ್ ಮಾಡಿ ಹಂಚಿಕೊಳ್ಳಲು ಸಿದ್ಧ.
ನಿಮಗೆ ಜಾಗತಿಕ ಗಮನ
GRANSHAN ಮಾಧ್ಯಮಗಳು ಮತ್ತು ಆಯ್ದ ಮಾಧ್ಯಮ ಪಾಲುದಾರರ ಮೂಲಕ ಅಂತರರಾಷ್ಟ್ರೀಯ ಪ್ರೇಕ್ಷಕರನ್ನು ತಲುಪಿ.
ಆನ್ಲೈನ್ ಪ್ರದರ್ಶನ ಮತ್ತು ದೀರ್ಘಾವಧಿ ಸಂಗ್ರಹದಲ್ಲಿ ನಿಮ್ಮ ಕೃತಿ
ನಮ್ಮ ಆನ್ಲೈನ್ ಪ್ರದರ್ಶನದಲ್ಲಿ ನಿಮ್ಮ ಯೋಜನೆಯನ್ನು ಪ್ರದರ್ಶಿಸಿ, ಶಾಶ್ವತ ಡಿಜಿಟಲ್ ಸಂಗ್ರಹದಲ್ಲಿ ಕಾಪಾಡಿ – ಈ ಮೊದಲ ಆವೃತ್ತಿಯಿಂದಲೇ.
ಮುಖ್ಯ ಮತ್ತು ಪ್ರಾದೇಶಿಕ ಪ್ರದರ್ಶನಗಳಲ್ಲಿ ನಿಮ್ಮ ವಿನ್ಯಾಸ
Award Premiere ಮತ್ತು Core Exhibition ನಂತರ ಆಯ್ದ ಕೃತಿಗಳನ್ನು GRANSHAN ನ ಅಂತರರಾಷ್ಟ್ರೀಯ ಪಾಲುದಾರ ಜಾಲದ ಮೂಲಕ ಪ್ರಸ್ತುತಪಡಿಸಲಾಗುತ್ತದೆ – ಜಗತ್ತಿನ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ನಡೆಯಬಹುದಾದ ಪ್ರಾದೇಶಿಕ ಪ್ರದರ್ಶನಗಳೂ ಇದರಲ್ಲಿ ಸೇರಿವೆ.
ಯೋಜಿತ ಮುದ್ರಿತ ಪ್ರಕಟಣೆ
ಮನ್ನಣೆ ಪಡೆದ ಕೃತಿಗಳಿಂದ ಆಯ್ದ ಸಂಕಲನವನ್ನು ಒಳಗೊಂಡ ಮುದ್ರಿತ ಪ್ರಕಟಣೆಯನ್ನು ಸಿದ್ಧಪಡಿಸುತ್ತಿದ್ದೇವೆ.
ಅಕ್ಷರಶೈಲಿ ಸಂಸ್ಥೆಯ ಬೆಳಕಿನಲ್ಲಿ
Foundry’s Choice: ಅಕ್ಷರಶೈಲಿ ಸಂಸ್ಥೆ ನಿಮ್ಮ ಯೋಜನೆಯನ್ನು ತನ್ನ ಪ್ರೇಕ್ಷಕರಿಗೆ ತೋರಿಸುತ್ತದೆ, ನಂತರ GRANSHAN ಅದನ್ನು ಜಗತ್ತಿಗೆ ತೋರಿಸುತ್ತದೆ.
Bloom Award ಏಕೆ ಮುಖ್ಯ?
ಪಾಲುದಾರರು
Supporting Foundries Club
ಪ್ರಮುಖ ಪ್ರಾಯೋಜಕರು
Base Award ಪಾಲುದಾರರು
Bloom Award ಪಾಲುದಾರರು
GRANSHANಗೆ ಬೆಂಬಲ ನೀಡಲು ಬಯಸುವಿರಾ? ಹಿಂಜರಿಯದೆ ನಮಗೆ ಇಮೇಲ್ ಮಾಡಿ: granshan@granshan.com